ಮಂಗಳವಾರ, ಮಾರ್ಚ್ 27, 2012

ಕ.ರಾ.ರ.ಸಾ.ಸಂ.ನ ತಪ್ಪಿಗೆ ಕನ್ನಡಿಗ ಪ್ರಯಾಣಿಕನಿಗೆ ದಂಡ !

ಅಂತರ್ಜಾಲದಲ್ಲಿ ಈ ಅಂಕಣವನ್ನು ನೀವು ಓದುತ್ತಿದ್ದೀರ ಎಂದರೆ ನಿಮಗೆ ಅಂತರ್ಜಾಲ ಬಳಸಿ ನಮ್ಮ ಕ.ರಾ.ರ.ಸಂಸ್ತೆಯ ಬಸ್ಸಿಗೆ ಯಾವುದಾದರು ಊರಿಗೆ ಮುಂಗಡ ಚೀಟಿಯನ್ನು ಪಡೆದು ಕೊಳ್ಳುವ ಕುರಿತು ಗೊತ್ತಿರಲೇಬೇಕು. ಈ ಸಂಸ್ತೆಯ ಮಿಂಬಲೆ ತಾಣವಾಗಲಿ (ವೆಬ್ ಸೈಟ್) ಹಾಗು ಅದರಲ್ಲಿ ದೊರಕುವ ಮುಂಗಡ ಚೀಟಿಗಳಾಗಲಿ (ಇ- ಚೀಟಿ) ಕನ್ನಡದಲ್ಲಿ ಸಿಗುವುದು ಗಗನ ಕುಸುಮವಾಗಿದೆ. ಕನ್ನಡದಲ್ಲಿ ಸೇವೆ ಸಿಗದಿದ್ದರೆ ಏನ್ ಹೋಗಬಾರದು ಹೋಗುತ್ತೆ ಎಂದು ನೀವು ಕೇಳೋದಾದ್ರೆ ಈ ಕೆಳಗಿನ ಒಂದು ನೈಜ ಘಟನೆ ಓದಿ;
ಇದು ನಡೆದದ್ದು ೨೦೧೧ರ ಆಗಸ್ಟಿನಲ್ಲಿ, ನನ್ನವರೊಬ್ಬರು ಬೆಂಗಳೂರಿನಿಂದ ಚಿಕ್ಕಮಗಳೂರಿನ ಆಲ್ದೂರಿಗೆ ಪ್ರಯಾಣ ಮಾಡ ಬೇಕಿತ್ತು, ಮೈಸೂರಿನಲ್ಲಿ ಕುಳಿತು, ಅವರಿಗಾಗಿ ಕ.ರಾ.ರ.ಸಾ.ಸಂಸ್ತೆಯ ಮಿಂಬಲೆ ತಾಣದಲ್ಲಿ ಮುಂಗಡ ಚೀಟಿ ಕೊಂಡುಕೊಂಡ ನಾನು ನನ್ನ ಸ್ನೇಹಿತನ ಮೂಲಕ ಆ ಚೀಟಿಯ ಪ್ರತಿಯನ್ನು (ಇ- ಟಿಕೆಟ್) ನನ್ನವರಿಗೆ ತಲುಪಿಸಿದೆ. ಅನಂತರ ನನ್ನ ದಿನದ ಕೆಲಸದಲ್ಲಿ ನಾನು ಮುಳುಗಿ ಹೋದೆ. ಆ ದಿನ ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ನನ್ನ ಅಲೆಯುಲಿಗೆ ನನ್ನವರಿಂದ ಕರೆ ಬಂತು, ಕರೆ ಪಡೆದಾಗ ಆ ತುದಿಯಿಂದ "ಹೇಯ್ ರತಿ, ನೀ ಕಳಿಸಿದ ಚೀತಿನ ಕಂಡಕ್ಟರ್ ಒಪ್ಪಿ ಕೊಳ್ತಾ ಇಲ್ಲಪ್ಪ, ಇದರ ಜೊತೆಗೆ ಫೋಟೋ ಇರೋ ಗುರುತಿನ ಚೀಟಿ ಬೇಕಂತೆ, ಅದು ನನಗೆ ಗೊತ್ತಿರ್ಲಿಲ್ಲ, ಈಗ ಯಾವ ಗುರುತಿನ ಚೀಟಿನು ನನ್ನ ಹತ್ತಿರ ಇಲ್ಲ, ಬಸ್ಸಿಗೆ ನಾವು ಹತ್ತಿ ಆಗಿದೆ. ಕಂಡಕ್ಟರ್, ಬಸ್ಸಿಂದ ಇಳಿಯಿರಿ ಇಲ್ಲ ಬೇರೆ ಚೀಟಿ ಮಾಡಿಸಿ ಅಂತಿದ್ದಾರೆ, ಏನು ಮಾಡೋದು ಈಗ?" ಅಯ್ಯೋ, ನಾನೇ ದೊಡ್ಡ ತಪ್ಪು ಮಾಡಿದೆ ಎಂದು ನನಗನಿಸಿತು, 'ನನ್ನ ಕೆಲಸದ ಒತ್ತಡದ ನಡುವೆ ನಿಮಗೆ 'ಗುರುತಿನ ಚೀಟಿ'ಯನ್ನು ಅದರೊಟ್ಟಿಗೆ ತೆಗೆದುಕೊಂಡು ಹೋಗಬೇಕೆಂಬುದನ್ನು ಹೇಳುವುದ ಮರೆತೆ' ಎಂದು ನಾ ಅವರಿಗೆ ಹೇಳಿದೆ.
ಆ ಕಡೆಯಿಂದ ಅವರೆಂದರು, "ಇಲ್ಲಪ್ಪ, ಹೊರಡೋ ಮುಂಚೆನೇ ನಾನು ಈ ಚೀಟಿನ ಓದೋಕೆ ನೋಡ್ದೆ, ಆದ್ರೆ ಅದು ಬರಿ ಇಂಗ್ಲಿಷಲ್ಲಿ ಇತ್ತು, ಅದು ನನಗೆ ಬರೋದಿಲ್ಲವಲ್ಲ." ಆಮೇಲೆ ಅವರು ಅದೇ ಬಸ್ಸಿಗೆ ಮೊತ್ತೊಮ್ಮೆ ಬೇರೆ ಚೀಟಿ ಪಡೆದು ಪ್ರಯಾಣ ಮಾಡಿದರು. ( ಆ ದಿನದ ಮುಂಗಡ ಚೀಟಿಯನ್ನು ಕೆಳಗೆ ಲಗತ್ತಿಸಿದ್ದೇನೆ).
ನಾನು ಹೇಳ ಬಯಸುವುದು: ಮೇಲಿನ ಘಟನೆಯಲ್ಲಿ ಒಬ್ಬ ಕನ್ನಡಿಗ, ಕರ್ನಾಟಕದ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಕರ್ನಾಟಕ ರಾಜ್ಯದ ಬಸ್ಸಿನಲ್ಲೇ ಪ್ರಯಾಣಿಸುವಾಗ ಕೇವಲ ನಮ್ಮದಲ್ಲದ ಇಂಗ್ಲಿಷಿನ ಕಾರಣದಿಂದಾಗಿ ಗೊಂದಲ ಉಂಟಾಗಿ ಹಣ ಹಾಗು ಪ್ರಯಾಣದ ನೆಮ್ಮದಿ ಎರಡನ್ನು ಕಳೆದುಕೊಳ್ಳ ಬೇಕಾಯ್ತು. 
ಮುಂಗಡವಾಗಿ ಪಡೆದ ಇ -ಚೀಟಿಯಲ್ಲಿ "Important " ಎಂಬ ಹಣೆಪಟ್ಟಿಯ ಕೆಳಗೆ  ನೀಡುವ ಮಾಹಿತಿ ಪೂರ್ತಿಯಾಗಿ ಇಂಗ್ಲಿಷಿನಲ್ಲಿದೆ (ಕೆಳಗೆ ಅದರ ಪ್ರತಿ ಲಗತ್ತಿಸಿದೆ), ಇದು ನಿಜವಾಗಿಯೂ ಎಲ್ಲಾ ಕನ್ನಡಿಗರಿಗೆ ತಲುಪುತ್ತದೆಯೇ? ಅತಿ ಮುಖ್ಯವೆನಿಸುವ ಮಾಹಿತಿಗಳನ್ನು ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ನೀಡಬೇಕೆಂಬ ಸಾಮಾನ್ಯ ಜ್ಞಾನ ನಮ್ಮ ಸಂಸ್ತೆಗೆ ಇಲ್ಲವಾಯಿತೇ? ಒಂದು ವೇಳೆ ಆ ಮುಂಗಡ ಚೀಟಿ ಕನ್ನದಲ್ಲಿ ದೊರೆತಿದ್ದರೆ ನನ್ನವರು ಹಣವನ್ನು ಜೊತೆಗೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರಲಿಲ್ಲ. ತಾವು ಮಾಡದ ತಪ್ಪಿಗೆ ದಂಡ ತೆರಬೇಕಾಗಿದ್ದು ವಿಷಾದ.
ಕ.ರಾ.ರ.ಸಾ.ಸಂಸ್ತೆಯ ಬೇಜವಾಬ್ದಾರಿಯಿಂದಾಗಿ ಹೀಗೆ ಎಷ್ಟು ಜನ ಕನ್ನಡಿಗರು ತೊಂದರೆಗೆ ಒಳಗಾಗುತ್ತಿದ್ದರೋ ಗೊತ್ತಿಲ್ಲ. ಕ.ರಾ.ರ.ಸಾ.ಸಂಸ್ಥೆ ರಾಜ್ಯ ಸರ್ಕಾರದ ಅಧೀನದ್ದು ಅದರ ಬಳಕೆದಾರರು ಬಹುಭಾಗ ಕನ್ನಡಿಗರೇ ಆಗಿದ್ದಾರೆ, ಆದರೆ ಸಾರಿಗೆಯ ಕೊಡುಗೆಗಳ ಜಾಹಿರಾತುಗಳು, ಗ್ರಾಹಕ ಸೇವಾ ಕೇಂದ್ರದ ಐವಿಅರ್ ಗಳು, ಬಸ್ಸಿನ ಚೀಟಿಗಳು (ಕೆಲವು ಕಡೆ), ಮಿಂಬಲೆ ತಾಣಗಳು ಹಾಗು  ಬಸ್ಸಿನ ಮನರಂಜನೆಗಳು ಪ್ರಾಥಮಿಕವಾಗಿ ಕನ್ನಡದಲ್ಲಿ ಇಲ್ಲದಿರಿವುದು ಹಲವು ಅನಾನುಕೊಳಕ್ಕೆ ದಾರಿ ಮಾಡಿದೆ. ಕ.ರಾ.ರ.ಸಾ.ಸಂ ನಲ್ಲಿ ಕನ್ನಡ ಪ್ರಾಥಮಿಕ ಭಾಷೆಯಾಗಿರಲಿ, ಮಿಂಬಲೆ ತಾಣಗಳಲ್ಲಿ, ಜಾಹಿರಾತುಗಳಲ್ಲಿ, ಬಸ್ಸಿನ ಮನರಂಜನೆಗಳಲ್ಲಿ ಹಾಗು ಗ್ರಾಹಕ ಸೇವಾ ಕೇಂದ್ರದಲ್ಲಿ ಕನ್ನಡಲ್ಲೇ ಮೊದಲು ಸೇವೆ ನೀಡಿದಲ್ಲಿ ಹೆಚ್ಚು ಹೆಚ್ಚು ಅನುಕೂಲಕರವಾಗಿರುವುದು.

ಕ.ರಾ.ರ.ಸಾ.ಸಂಗೆ ಕನ್ನಡದಲ್ಲಿ ಪ್ರಾಥಮಿಕ ಸೇವೆ ನೀಡಬೇಕೆಂದು ಒತ್ತಾಯ ಮಾಡೋ ಮನಸಾದಲ್ಲಿ ಒತ್ತಿ ನಿಮ್ಮ ಅನಿಸಿಕೆ ಬರೆಯಿರಿ, ಗ್ರಾಹಕರ ಅನುಕೂಲಕ್ಕಾಗಿ ಕನ್ನಡದಲ್ಲಿ ಮೊದಲು ಸೇವೆ ನೀಡಬೇಕೆಂದು ಕೇಳಿ,  ಇಲ್ಲವಾದರೆ ಈ ದೂರವಾಣಿಗೆ ಕರೆ ಮಾಡಿ ಕನ್ನಡ ಸೇವೆ ನೀಡಲು ಕೇಳಿಕೊಳ್ಳಿ -080-22873377, 080-22870099, 7760990560

http://www.ksrtc.in/site/feedback

10 ಕಾಮೆಂಟ್‌ಗಳು:

  1. ಇದನ್ನು ಎಲ್ಲ ಪತ್ರಿಕೆಗಳಿಗೆ ಮಿಂಚೆ ಮಾಡಿರಿ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪತ್ರಿಕೆಗಳಿಗೆ ಬರೆದಿದ್ದೆ, ಆದರೆ ಪ್ರಕಟವಾಗಿಲ್ಲ, ಕಾರಣ ಏನೋ ಗೊತ್ತಿಲ್ಲ,.. ಹಾಗಾಗಿ ಇದನ್ನು ಅಂಕಣದಲ್ಲಿ ಬರೆದಿದ್ದೇನೆ.

      ಅಳಿಸಿ
  2. i frequently travel to Tamilnadu in KSRTC buses. For my shock, The destination board is put only in English and Tamil.This is very bad! KSRTC... do u think there is no one to control u?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮುಂದಿನ ನಿಮ್ಮ ಪ್ರಯಾಣದಲ್ಲೂ ಹಾಗೆ ಆದರೆ, ಅದನ್ನು ಪ್ರಶ್ನೆ ಮಾಡಿ, ನಿಮ್ಮ ಹಣ ನಿಮ್ಮ ಹಕ್ಕು. ಹಾಗೆಯೇ ಅದರ ಒಂದು ಬಾವಚಿತ್ರ ತೆಗೆದು graahaka@gmail.com, ಈ ಮಿಂಚೆ ವಿಳಾಸಕ್ಕೆ ಕಳುಹಿಸಿ ಕೊಡಿ.

      ಅಳಿಸಿ
  3. ನಿಮ್ಮ ಸ್ನೇಹಿತರು ಕಳೆದುಕೊಂಡ ಹಣಕ್ಕೆ ಬೆಲೆ ಕಟ್ಟಬಹುದು ಆದರೆ ಅವರು ಕಳೆದುಕೊಂಡ ನೆಮ್ಮದಿಗೆ ಬೆಲೆ ಕಟ್ಬಲು ಸಾಧ್ಯವೇ?

    ಕನಾ೵ಟಕದಲ್ಲಿ ಕನ್ನಡವನ್ನೇ ಮೂಲೆಗುಂಪು ಮಾಡುವ ಮನೋಭಾವ ಹೊಂದಿರುವ ನೌಕರರಿಗೆ,ಕೆಲವೊಮ್ಮೆ ಐ.ಎ.ಎಸ್, ಐ.ಪಿ.ಎಸ್ ಶ್ರೇಣಿಯ ಹಿರಿಯ ಅಧಿಕಾರಿಗಳು ಕೆಳವಗ೵ದ ಸಿಬ್ಬಂದಿಗೆ ಕಿರುಕುಳ ನೀಡಿದಾಗ ಮಾತ್ರ ಕನ್ನಡತನ ಜಾಗೃತಗಾಗಿಬಿಡುವುದು ಎಂಥ ವಿಪಯಾ೵ಸ?

    ಪ್ರತ್ಯುತ್ತರಅಳಿಸಿ
  4. ಕನ್ನಡಕ್ಕೆ ಇಂತಹ ಸ್ಥಿತಿ ಬಂದಿರುವುದು ನಿಜಕ್ಕೂ ಶೋಚನೀಯ. ಕೆಎಸ್ಆರ್ಟಿಸಿಯ ವೋಲ್ವೋ ಬಸ್ನಲ್ಲಿ ಹಿಂದಿ ಸಿನಿಮಾ ಹಾಕ್ತಾರೆ. ಕಂಡಕ್ಟರ್ಗೆ ಕೇಳಿದ್ರೆ ಗವರ್ನಮೆಂಟ್ ಕೊಟ್ಟಿದ್ದು ಅಂತಾರೆ... ಇವರು ತಮಿಳು ಮತ್ತು ತೆಲುಗು ಜನರನ್ನ ನೋಡಿ ಕಲೀಬೇಕು.

    ಪ್ರತ್ಯುತ್ತರಅಳಿಸಿ
  5. ಮೇಲೆ ಹೆಸರಿಸಿದ ಪ್ರಕರಣ ಓದಿ ವಿಷಾದವೆನಿಸುತ್ತದೆ. ಇಷ್ಟು ದಿನ ನಾನೂ ಸಾರಿಗೆಯಲ್ಲಿ ಹೋಗಿದ್ದೇನೆ. ಅಷ್ಟೊ೦ದು ಗಮನ ಕೊಟ್ಟಿದ್ದಿಲ್ಲ. ನಿನ್ನ ಪ್ರಯತ್ನ ನಿಜವಾಗ್ಲೂ ಶ್ಲಾಘನೀಯ.

    ಪ್ರತ್ಯುತ್ತರಅಳಿಸಿ
  6. ನಿರಂತರ ಒತ್ತಡದಿಂದ ಮಾತ್ರ ನಮ್ಮಲ್ಲಿ ಬದಲಾವಣೆ ಸಾಧ್ಯ. ಓದುಗರಿಗೆ ನಾ ಕೇಳಿಕೊಳ್ಳುವುದು ಇಷ್ಟೇ, ಕರ್ನಾಟಕದಲ್ಲಿ ಕನ್ನಡ ಸೇವೆ ಸಿಗದಿದ್ದಾಗ ಅದನ್ನು ಕೇಳಿ ಪಡೆಯಿರಿ.

    ಪ್ರತ್ಯುತ್ತರಅಳಿಸಿ
  7. ಕ.ರಾ.ರ.ಸಾ.ನಿಗಮದಲ್ಲಿ ಕನ್ನಡ ಅನುಷ್ಟಾನದ ಕುರಿತು ಹಲವು ಪತ್ರಗಳನ್ನು ಗ್ರಾಹಕರು ಬರೆಯುತ್ತಲೇ ಇದ್ದಾರೆ. ಕೊನೆಗೂ ಒತ್ತಡಕ್ಕೆ ಮಣಿದು ನಿಗಮದವರು ಅಲ್ಲಲ್ಲಿ ಕನ್ನಡವನ್ನು ಬಳಕೆ ಮಾಡಲು ಆರಂಭಿಸಿದ್ದಾರೆ. ಮುಂಗಡವಾಗಿ ಪಡೆಯುವ ಇ - ಚೀಟಿಯಲ್ಲಿ ಕನ್ನಡ ಇಲ್ಲದಿರುವುದರಿಂದ ಆದ ತೊಂದರೆಗಳ ಕುರಿತು ಹಲವಾರು ಗ್ರಾಹಕರು ನೈಜ ನಿದರ್ಶನಗಳನ್ನು ನಿಗಮಕ್ಕೆ ನೀಡಿದ್ದರು, ಅಂತು ಇಂತೂ ಗ್ರಾಹಕರ ಕೂಗು ನಿಗಮಕ್ಕೆ ನಿಧಾನವಾಗಿ ಮುಟ್ಟುತ್ತಿದೆ. ಇಂದು ಪಡೆದ ಮುಂಗಡ ಚೀಟಿಯಲ್ಲಿ "ವಿಶೇಷ ಸೂಚನೆಗಳನ್ನು" ಕನ್ನಡದಲ್ಲಿ ನೋಡಿದೆ.
    ಹೀಗೆಯೇ ನಿಗಮದ ಸಂಪೂರ್ಣ ಸೇವೆ ಪ್ರಾಥಮಿಕವಾಗಿ ಕನ್ನಡದಲ್ಲಿ ಸಿಗುವಂತಾಗಿ ಬಳಕೆದಾರರಾದ ಕನ್ನಡಿಗರಿಗೆ ಅನುಕೂಲವಾಗಲಿ.

    ಸಂಪೂರ್ಣ ಕನ್ನಡ ಸೇವೆ ಸಿಗಲೆಂದು ಜಾಗೃತ ಗ್ರಾಹಕರ ಕೂಗು ನಿಲ್ಲದಿರಲಿ

    ಪ್ರತ್ಯುತ್ತರಅಳಿಸಿ