ಮಂಗಳವಾರ, ಜುಲೈ 5, 2011

ತಾವು ಕುಳಿತ ಮರದ ಕೊಂಬೆಯನ್ನು ತಾವೇ ಕಡಿದು ಕೊಳ್ಳುವ ನಮ್ಮ ಸ್ಯಾಂಡಲ್ ವುಡ್ ಮಂದಿ

ನಮ್ಮ ಕನ್ನಡ ಚಿತ್ರರಂಗಕ್ಕೆ ನೇರ ಅಥವಾ ದೂರ ಸಂಪರ್ಕ ಹೊಂದಿರುವ  ಯಾರದರನ್ನು ಒಬ್ಬರನ್ನು 'ನಮ್ಮ ಸ್ಯಾಂಡಲ್ ವುಡ್ ಸಮಸ್ಯೆ ಏನು?' ಎಂದು ಕೇಳಿ, 'ಪರಭಾಷೆ ಚಿತ್ರಗಳ ಧಾಳಿ, ಕನ್ನಡಿಗರು ಚಿತ್ರಮಂದಿರಕ್ಕೆ ಬರವುದಿಲ್ಲ, ಕನ್ನಡ ಚಿತ್ರಗಳನ್ನು ನೋಡುವುದಿಲ್ಲ....' ಎಂದೆಲ್ಲ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಅವರು ಹೇಳುವ ಮಾತು ಸರಿಯಾಗಿಯೇ ಇರಬಹುದು ಹಾಗೆಯೇ ಅದಕ್ಕೆ ಕಾರಣಗಳು ಹಲವಿರಬಹುದು ಆದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ನನಗೆ ತೋಚುವುದು ಏನೆಂದರೆ ಈ ಎಲ್ಲ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಚಿತ್ರರಂಗದವರೇ ಹೊಣೆ! ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು.

ನಿನ್ನೆ ನಾನು ಸುವರ್ಣ ಟಿವಿಯಲ್ಲಿ, ಸುವರ್ಣ ಫಿಲಂ ಅವಾರ್ಡ್ಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ, ಬಹಳ ಅಪರೂಪಕ್ಕೆ ಅನ್ನುವಂತೆ ಕನ್ನಡಿಗರಿಗೆ ಇಂಥಹ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಸಿಗುವುದು. ಜೊತೆಗೆ ಕನ್ನಡ ಚಿತ್ರರಂಗದವರಿಗೆ ಇದು ಅತಿ ಮುಖ್ಯ ಹಾಗು ಅತಿ ವಿರಳವಾಗಿ ದೊರಕುವಂತಹ ಅವಕಾಶ, ಇಲ್ಲಿ ಕನ್ನಡ ಚಿತ್ರರಂಗದ ವಿಶೇಷಗಳನ್ನು, ಸಾಧನೆಗಳನ್ನು, ಮುಂದಿನ ಗುರಿಗಳನ್ನು ಹಾಗು ಚಿತ್ರರಂಗದ ಹಿರಿಮೆಯನ್ನು ಜನರಿಗೆ ಹತ್ತಿರವಾಗುವಂತೆ ತಿಳಿಸುವ ಬಹುದಾದಂಥಹ ಬಹು ದೊಡ್ಡ  ವೇದಿಕೆ ನಿರ್ಮಾಣವಾಗಿತ್ತು, ಆದರೆ ನಮ್ಮವರು ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದು ಬೇಸರದ ಸಂಗತಿ.

ಸಾಮಾನ್ಯವಾಗಿ ಇಂಥಹ ಕಾರ್ಯಕ್ರಮಗಳು ನಮಗೆ ಬಾಲಿವುಡ್, ಕಾಲಿವುಡ್ ಹಾಗು ಟಾಲಿವುಡ್ ಗಳಲ್ಲಿ ಹೆಚ್ಹಾಗಿ ಕೇಳಿರಿತ್ತೇವೆ ಅಥವಾ ನೋಡಿರುತ್ತೇವೆ, ಅಲ್ಲಿನ ಕಾರ್ಯಕ್ರಮದ ಮನರಂಜನೆ ಕೇವಲ ಅವರ ಭಾಷೆಯ ಚಿತ್ರಗಳ ಹಾಡುಗಳಿಗೆ ಅಥವಾ ತುಣುಕುಗಳಿಗೆ ಮೀಸಲಾಗಿರುತ್ತದೆ, ಆ ಮೂಲಕ ಅವರು ಪ್ರೇಕ್ಷಕರನ್ನು ಪ್ರೇಕ್ಷಕರಿಗೆ ಗೊತ್ತಿಲ್ಲದ ಹಾಗೆ ಆ ಭಾಷೆಯ ಪರಿಧಿಯೊಳಗೆ ಕಟ್ಟಿ ಹಾಕಿರುತ್ತಾರೆ, ಅದರ ಫಲಿತಾಂಶ ಏನೆಂದು ನಾನೇನು ಬೇರೆಯಾಗಿ ಹೇಳಬೇಕಿಲ್ಲ ಅದು ಎಲ್ಲರಿಗು ಗೊತ್ತಿರುವ ವಿಷಯ.

ಆದರೆ ನಮ್ಮಲ್ಲಿ ನಡೆದದ್ದೇನು? "ಸಾಲು ಸಾಲು ಪರಭಾಷೆಯ ಹಾಡುಗಳಿಗೆ ಕುಣಿತ", (ವಿಪರ್ಯಾಸವೆಂದರೆ ಕನ್ನಡ ಚಿತ್ರ ನಟನೆಗಾಗಿ ಎರೆಡೆರೆಡು ಫಿಲಂ ಫೇರ್ ಪ್ರಶಸ್ತಿ ಪಡೆದ ನಟಿಯರಿಂದ, ಬೇರೆ ಭಾಷೆ ಚಿತ್ರದ ಹಾಡುಗಳಿಗೆ ನರ್ತನ, ಅವರ ಮುಂದಿನ ಚಿತ್ರಗಳಿಗೆ ಕನ್ನಡ ಚಿತ್ರ ರಂಗ ಮತ್ತು ಕನ್ನಡಿಗರು ಬೇಡವೇನೋ?) ಈ ಮೂಲಕ ಅವರು ಅನ್ಯ ಭಾಷೆಯ ಚಿತ್ರಗಳಿಗೆ ಯಾವುದೇ ಖರ್ಚಿಲ್ಲದೆ ನಮ್ಮ ನಾಡಿನಲ್ಲಿ ಮಾರುಕಟ್ಟೆ ಒದಗಿಸಿ ಕೊಡುತ್ತಿದ್ದಾರೆ. 'ನಮ್ಮ ಸಿನಿಮಾ ಹಾಡುಗಳು ಯಾವದಕ್ಕೂ ಕಮ್ಮಿ ಇಲ್ಲ,  ನೋಡಿ, ಕೇಳಿ ಎಂಥೆಂಥಹ ಹಾಡುಗಳಿವೆ ನಮ್ಮಲ್ಲಿ, ಇನ್ನು ಮುಂದೆ ಇವೆಲ್ಲಕ್ಕೂ ಮೀರಿದ ಹಾಡು, ಚಿತ್ರಗಳು ಬರುತ್ತವೆ. ಕನ್ನಡ ಚಿತ್ರರಂಗ ಮನರಂಜನೆಯ ಗಣಿ' ಎಂಬ ಸೂಕ್ಷ್ಮ ಸಂದೇಶವನ್ನು ಈ ಕಾರ್ಯಕ್ರಮದಲ್ಲಿ ಎಲ್ಲ ಕನ್ನಡಿಗರಿಗೆ ನೀಡಬಹುದಿತ್ತು. ಆದರೆ ಅವರು ಮಾಡಿದ್ದು, 'ಕನ್ನಡ ಚಿತ್ರಗಳಿಗೆ ಅನ್ಯ ಭಾಷೆಯ ಹೆಸರುಗಳು, ಕನ್ನಡ ಕಾರ್ಯಕ್ರಮಗಳ ನಡುವೆ  ಅನ್ಯ ಭಾಷೆಯ ಕುಣಿತಗಳು.' ಇನ್ನು ಜನರನ್ನು ಹೇಗಪ್ಪ ಕಟ್ಟಿ ಹಾಕಲು ಸಾಧ್ಯ? ಪರಭಾಷೆಯ ಹಾಡುಗಳಿಗೆ ನೃತ್ಯ ಮಾಡುತ್ತಾ, ಅವರಿಗೆ ಪುಕ್ಕಟೆ ಮಾರುಕಟ್ಟೆಯನ್ನು ನಮ್ಮ ನಾಡಿನಲ್ಲಿ ನೀಡುತ್ತ, ಕನ್ನಡ ಚಿತ್ರರಂಗಕ್ಕೆ  ಕನ್ನಡಿಗರೇ ಅನ್ಯರ ಧಾಳಿಯನ್ನು ಆಹ್ವಾನಿಸಿರುವುದು ಬೇಸರದ ವಿಷಯ.
ಇಷ್ಟು ಸಾಮನ್ಯ ಜ್ಞಾನ ಇಲ್ಲದ ಇವರು ಕನ್ನಡ ಚಿತ್ರ ರಂಗದ ದುಸ್ತಿತಿಗೆ ಕನ್ನಡಿಗರನ್ನು ಆಕ್ಷೇಪಣೆ ಮಾಡುವ ಯಾವ ಅಧಿಕಾರವು ಹೊಂದಿಲ್ಲ. ಸುವರ್ಣ ಫಿಲಂ ಅವಾರ್ಡ್ಸನಲ್ಲಿ ನಡೆದ ಪ್ರಮಾದಗಳು ಮರುಕಳಿಸಿದರೆ ಪರಭಾಷೆ ಚಿತ್ರಗಳಿಗೆ ನೀವೇ ರತ್ನಗಂಬಳಿ ಹಾಸಿ ಕೊಟ್ಟಹಾಗೆ, ನಿಮ್ಮ ಹೊಂಡವನ್ನು ನೀವೇ ತೆಗೆದು ಕೊಂದ ಹಾಗೆ, ನೀವು ಕುಳಿತ ಮರದ ಕೊಂಬೆಯನ್ನು ನೀವೇ ಕಡಿದ ಹಾಗೆ! ಕನ್ನಡಿಗರನ್ನು ಸೆಳೆಯಲು ಕನ್ನಡೇತರ ಮನರಂಜನೆಯ ಅಗತ್ಯವಿಲ್ಲ.
"ಕನ್ನಡ ಚಿತ್ರರಂಗವನ್ನು ಮೊದಲು ಕನ್ನಡವಾಗಿಸಿ"

18 ಕಾಮೆಂಟ್‌ಗಳು:

  1. manarajanegu bhashegu "link" madodu sariyalla anta nannanisike. manaranjane yaav bhashe alliddarenu, chenagidre elli bekadru odutte..

    aadre kannada chitraranganda paristhiti ge kannada chitrarangadavare karana annoddu noorakke nooru satya..

    at the end of the day, an audience isn't responsible for the quality of the movie.. it is responsible for judging it. if the creative minds are dead, the industry is more or less the grave...

    ಪ್ರತ್ಯುತ್ತರಅಳಿಸಿ
  2. ಘನಶ್ಯಾಮ್, ಇಲ್ಲಿ ಮನರಂಜನೆ ಮತ್ತು ಭಾಷೆ ಮಾತ್ರ ಅಲ್ಲ, ಮನರಂಜನೆಯನ್ನು ಯಾವ ಭಾಷೆಯಲ್ಲಿ "ಎಲ್ಲಿ" ನೀಡುತ್ತಿದ್ದಾರೆ ಎಂಬುದು ಮುಖ್ಯ... ನಮ್ಮ ಮನೆಯಲ್ಲಿ ನಮ್ಮ ಮಕ್ಕಳು ಹಸಿದು ಸಾಯುತ್ತಿರುವಾಗ ಪಕ್ಕದ ಮನೆಯವರನ್ನು ಕರೆದು ಊಟ ಹಾಕುವ ಅವಶ್ಯಕತೆ ಏನಿದೆ?
    ಮಾರುಕಟ್ಟೆಯಲ್ಲಿ ನಮ್ಮ ವಸ್ತುವಿಗೆ ಬೆಲೆ ಬರಬೇಕಾದರೆ ಅದರ ಗುಣ ವಿಶೇಷತೆ ಎಷ್ಟು ಮುಖ್ಯವೋ ಅದರ ಪ್ರಚಾರ ಕೂಡ ಅಷ್ಟೇ ಮುಖ್ಯ, ಹಾಗಾಗಿ ನಾವು ನಮ್ಮ ವಸ್ತುವಿನ ಜೊತೆ ಸ್ಪರ್ದೆಯಲ್ಲಿ ಇರುವ ಇನ್ನೊಂದು ವಸ್ತುವಿನ ಪ್ರಚಾರ ಕೊಡಲು ಹೋಗುವುದಿಲ್ಲ, ಅದು ಮೂರ್ಖತನ ಕೂಡ!
    ಏನೇ ಇರಲಿ, ನಿಮ್ಮ ಪ್ರತಿಕ್ರಿಯೆಗೆ ನನ್ನ ಅನಂತ ಅನಂತ ವಂದನೆಗಳು

    ಪ್ರತ್ಯುತ್ತರಅಳಿಸಿ
  3. ಶ್ಯಾಮ,

    ಕನ್ನಡ ಚಿತ್ರರಂಗ ಹಾಳಾಗ್ತಿದೆ ಅನ್ನೋದಕ್ಕೆ ಚಿತ್ರರಂಗವೇ ಕಾರಣ ಅನ್ನೋದು ಒಪ್ಪುವ ಮಾತೇ.
    ಚಿತ್ರರಂಗಕ್ಕೆ ಒಳ್ಳೆಯ ಮಾರುಕಟ್ಟೆ ಕಟ್ಟಿ ಕೊಡುವಲ್ಲಿ, ಪ್ರಚಾರದ ಕೆಲಸನೂ ಇರುತ್ತೆ.
    sensationalize ಮಾಡಿ ಚಿತ್ರಗಳನ್ನ ಒಂದೆರಡು ವಾರ ಹೌಸ್ ಫುಲ್ ಓಡ್ಸಿರೋದು ನಿನಗೆ ಗೊತ್ತಿರಬಹುದು.

    ಈಗ, ಕನ್ನಡ ಚಿತ್ರೋದ್ಯಮದ ಪ್ರಶಸ್ತಿ ಪ್ರದಾನ ಸಮಾರಂಬದಲ್ಲಿ, ಹಿಂದಿ ಹಾಡುಗಳನ್ನ ಹಾಕ್ಕೊಂಡು ಕುಣಿದು ಇವರು ಪರೋಕ್ಷವಾಗಿ ಹಿಂದಿ ಚಿತ್ರರಂಗಕ್ಕೆ (ಬಿಟ್ಟಿ) ಪ್ರಚಾರ ಕೊಡ್ತಿದಾರೆ.
    ಕನ್ನಡಿಗರು ಹಿಂದಿ ಚಿತ್ರಗಳನ್ನ (ಬೇರೆ ಯಾವುದೇ ಬಾಷೆಯ ಚಿತ್ರಗಳನ್ನ) ಹೆಚ್ಚು ನೋಡಕ್ಕೆ ಶುರು ಮಾಡಿದರೆ, ಇವರ ಮಾರುಕಟ್ಟೆಗೆ ಹೊಡೆತ ಅನ್ನೋದು ಇವರ ಗಮನಕ್ಕೆ ಬಂದಂತಿಲ್ಲ.
    ತಾವು ಕೂಟ ರೆಮ್ಬೆಯನ್ನು ತಾವೇ ಕಡೆದುಕೊಳ್ಳೋದು ಅಂತ ಹೇಳಿರೋದು ತಕ್ಕುದಾಗಿದೆ.

    ಪ್ರತ್ಯುತ್ತರಅಳಿಸಿ
  4. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಪ್ರಿಯ ಶರತ್,

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮ್ಮ ಪ್ರತಿಕ್ರಿಯೆ ನೋಡಿದರೆ ನನ್ನ ಲೇಖನದ ಪೂರ್ಣ ಅರ್ಥ ತಮಗೆ ಆದಂತಿಲ್ಲ. ಇಂದು ಕನ್ನಡಿಗರು ಅಥವಾ ಕನ್ನಡ ಚಿತ್ರರಂಗ 'ಸುವರ್ಣ ಫಿಲಂ ಅವಾರ್ಡ್ಸ್ ನಲ್ಲಿ ಆದ' ತಪ್ಪನ್ನು ಅತಿ ಚಿಕ್ಕದು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕಡೆಗಣಿಸಿದರೆ ನಾಳೆ ಬರುವ ದೊಡ್ಡ ಅಪಾಯಕ್ಕೆ ತಲೆ ಕೊಟ್ಟಂತೆ... ನಿಮಗೊಂದು ಚಿಕ್ಕ ಪ್ರಶ್ನೆ, ನೀವು ಕನ್ನಡ ಚಿತ್ರ ರಂಗದ ಜೊತೆಗೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಚಿತ್ರ ರಂಗದ ಪ್ರಶಸ್ತಿ ಸಮಾರಂಭಗಳನ್ನು ಖಂಡಿತ ಒಂದಲ್ಲ ಒಂದು ಭಾರಿ ವೀಕ್ಷಿಸಿರುತ್ತೀರಾ, ಅಲ್ಲಿ ಅವರ ರಂಗದ ಹಾಡುಗಳನ್ನು ಬಿಟ್ಟು ಬೇರೆ ಯಾವ ಹಾಡುಗಳಿಗೂ ನೃತ್ಯ ಮಾಡುವುದಿಲ್ಲವಲ್ಲ ಎಂದು ಎಂದಾದರು ಯೋಚನೆ ಮಾಡಿದ್ದೀರಾ? ಕನ್ನಡ ಚಿತ್ರ ರಂಗವನ್ನು ಮೇಲೆ ತರುವಲ್ಲಿ ಚಿತ್ರರಂಗದವರಿಗೆ ಕಾಳಜಿ ಇಲ್ಲದಾಗ ಅಥವಾ ಅವರೇ ಫರಭಾಷೆ ಚಿತ್ರಗಳನ್ನು ಆಹ್ವಾನಿಸುವಾಗ, ಇನ್ನು ನನ್ನ ನಿಮ್ಮಂತಹ ಸಾಮನ್ಯ ಕನ್ನಡಿಗರು ಏನು ಮಾಡಲಾಗುತ್ತದೆ?
    ನನ್ನ ಬರಹದಲ್ಲಿ ಯಾವುದೇ ದೂಷಣೆಗಳಿಲ್ಲ, ಅದು ಕನ್ನಡ ಚಿತ್ರ ರಂಗದವರು ಮಾಡುತ್ತಿರುವ ತಪ್ಪನ್ನು ಎಚ್ಹರಿಸುವ ಪ್ರಯತ್ನ...
    ಇನ್ನು ನಿಮ್ಮ "ಜನಕ್ಕೆ quality ಚಿತ್ರಗಳು ಬೇಕು ಅಷ್ಟೇ, ಭಾಷೆ ಯಾವುದಾದರೇನು ? " ಮಾತಿನ ಬಗ್ಗೆ ಹೇಳ ಬೇಕಾದರೆ, ಒಂದು ಚಿತ್ರ ರಂಗದ ಮಾರುಕಟ್ಟೆ ಚೆನ್ನಾಗಿದ್ದರೆ ಅಲ್ಲವೇ ಹೊಸ ಹೊಸ ಪ್ರಯತ್ನಗಳು ನಡೆಯುವುದು, ಹೊಸ ಹೊಸ ತಂತ್ರಜ್ಞಾನ ಗಳ ಬಳಕೆ ಆಗುವುದು ಹಾಗೆಯೇ ಆ ಚಿತ್ರ ಹಾಗು ಚಿತ್ರ ರಂಗ ವಿಶ್ವ ಮಟ್ಟದಲ್ಲಿ ಹೆಸರು ಮಾಡುವುದು, ಆದ್ದರಿಂದ ನಮ್ಮ ಚಿತ್ರರಂಗದ ಮಾರುಕಟ್ಟೆಯನ್ನು ಗಟ್ಟಿಗೊಳಿಸಿ, ವಿಶ್ವ ಮಟ್ಟದಲ್ಲಿ ವಿಸ್ತಾರ ಮಾಡುವ ವಿಚಾರ ಹೊಂದಿದ್ದರೆ ಅಲ್ಲಿ ನಿಮಗೆ ಹಾಗು ನನಗೆ ಬೇಕಾದ quality ಚಿತ್ರ ಬರುತ್ತವೆ, ಅಂತಹ ಚಿತ್ರಗಳು ನಮ್ಮ ತಾಯಿ ಭಾಷೆಯಲ್ಲಿ ಬಂದರೆ ನಮಗೆ ಹೆಮ್ಮೆ ಒಂದೇ ಅಲ್ಲ, ಈ ಮಾರುಕಟ್ಟೆಯ ವಿಸ್ತಾರದಿಂದ ಎಷ್ಟೋ ಕನ್ನಡಿಗರಿಗೆ ಉದ್ಯೋಗ ಸಿಗ ಬಹುದು, ಹೆಸರು ಬರ ಬಹುದು, ಅವರ ಜೀವನಕ್ಕೆ ಒಂದು ದಾರಿ ಆಗ ಬಹುದು, ಆ ಕನ್ನಡಿಗರಲ್ಲಿ ನನ್ನ ಅಥವಾ ನಿಮ್ಮ ಗೆಳೆಯ ಇರ ಬಹುದು, ಸಂಭಂಧಿಕರಿರಬಹುದು.
    ಕನ್ನಡ ಚಿತ್ರ ರಂಗದ ಬಗ್ಗೆ ಇಷ್ಟೆಲ್ಲಾ ತಲೆ ಕೆಡಿಸಿ ಕೊಳ್ಳುವ ನಾನು ಕಳೆದ ೬ ತಿಂಗಳಲ್ಲಿ ಎಷ್ಟು ಸಿನಿಮಾ ನೋಡಿದೆ ಎಂದು ಲೆಕ್ಕಾಚಾರ ಹಾಕುವ ಅಗತ್ಯ ಇಲ್ಲ.
    ಕೊನೆಯದಾಗಿ,
    "ಯಾವುದೋ ಪ್ರಶಸ್ತಿ ಸಮಾರಂಭದಲ್ಲಿ ಪರ ಭಾಷಾ ಹಾಡಿಗೆ ಡಾನ್ಸ್ ಮಾಡಿದ್ರು ಅಂತ ಕೊರಗೊದಲ್ಲ!!!" ನಾನು "ನಮ್ಮದೇ ಪ್ರಶಸ್ತಿ ಸಮಾರಂಬದಲ್ಲಿ "ನಮ್ಮದಲ್ಲದ" ಹಾಡಿಗೆ ಡಾನ್ಸ್ ಮಾಡಿದ್ರು ಅಂತ ವಿಷಾದದಲ್ಲಿ ಇದ್ದೇನೆ"

    ಪ್ರತ್ಯುತ್ತರಅಳಿಸಿ
  6. ಶರತ್ ಅವರೇ,
    ಪ್ರಶಸ್ತಿ ಸಮಾರಂಭದಲ್ಲಿ ಬೇರೊಂದು ಬಾಷೆಯ ಹಾಡಿಗೆ ಕುಣಿಯೋ ಮೂಲಕ ಆ ಬಾಷೆಯ ಚಿತ್ರಗಳಿಗೆ ಇವರು ಪ್ರಚಾರ ಕೊಡ್ತಿದಾರೆ.
    ಕನ್ನಡ ಚಿತ್ರರಂಗದ ಪ್ರಚಾರ ಮಾಡಿ, ಅದನ್ನು ಇನ್ನೂ ಜನಪ್ರಿಯಗೊಳಿಸುವ ಒಂದು ಅವಕಾಶವನ್ನು ಹಾಳು ಮಾಡಿಕೊಂಡಿದ್ದಾರೆ.
    ಕನ್ನಡ ಚಿತ್ರರಂಗವನ್ನು ಬೆಳೆಸುವಲ್ಲಿ, ನೀವು ಹೇಳಿದಂತೆ ನಾವು ನೋಡುಗರ ಪಾತ್ರ ಎಷ್ಟಿದೆಯೋ, ಅದಕ್ಕಿಂತಾ ದೊಡ್ಡ ಪಾತ್ರ ಚಿತ್ರರಂಗದಲ್ಲೇ ಕೆಲಸ ಮಾಡುವವರದ್ದು.
    ಚಿತ್ರರಂಗದಲ್ಲೇ ಇರುವವರೂ ಹೀಗೆ ಎಚ್ಚರ ತಪ್ಪಿದಾಗ, ನಾವು ನೋಡುಗರು ಅವರನ್ನು ಎಚ್ಚರಗೊಳಿಸಬೇಕಾಗುತ್ತೆ.
    ನೀವು ಹೇಳಿದ, ಚಿತ್ರರಂಗವನ್ನು ಬೆಳೆಸುವಲ್ಲಿ ನೋಡುಗರ ಪಾತ್ರದ ಬಾಗವಾಗೇ ಈ ಬ್ಲಾಗನ್ನೂ ನೋಡಬಹುದು.

    ಪ್ರತ್ಯುತ್ತರಅಳಿಸಿ
  7. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  8. ಶರತ್,
    ನಿಮ್ಮ ಪ್ರತಿಕ್ರಿಯೆಯಲ್ಲಿ ನನಗೆ ನಿಮ್ಮಲ್ಲಿರುವ ಅಂಧತ್ವ ಕಾಣ ಸಿಗುತ್ತಿದೆ, ನೀವು ನೆರೆ ಹೊರೆಯ ರಾಜ್ಯದವರನ್ನು ಭಾಶಾಂಧರೆಂದು ಹೇಳುತ್ತಿದ್ದೀರಿ, ನನಗೆ ಈ ಮಾತು ಕೇಳಿ ನಗು ಬರುತ್ತಿದೆ, ಅವರು ಅವರ ತಾಯಿಯನ್ನು ಪ್ರೀತಿಸಿದರೆ ಅವರನ್ನು ನಾನು ಪ್ರೇಮಂಧ ಎಂದು ಹೇಳಲು ಸಾಧ್ಯವೇ, ಅವರು ಅವರ ತಾಯಿ ಭಾಷೆಯನ್ನೂ ಅವರ ಥಯಿಯಷ್ಟೇ ಪ್ರೀತಿಸುತ್ತಿದ್ದಾರೆ, ಅದರ ಮೂಲಕ ಅವರ ರಾಜ್ಯದಲ್ಲಿ ಅವರ ಭಾಷೆಯ ಸಾರ್ವಬೌಮತ್ವ ಸಾಧಿಸಿದ್ದಾರೆ, ಯಾವುದೇ ಅನ್ಯ ಭಾಷೆಯ ಧಾಳಿಗೆ ಅವರು ಸುಲಭವಾಗಿ ತುತ್ತಾಗುವ ಸಂಧರ್ಭಗಳು ಕಡಿಮೆ, ಇದರ ಪ್ರತಿಫಲಕ್ಕೆ ಅವರ ಚಿತ್ರ ರಂಗ ಒಂದು ಉದಾಹರಣೆ ಅಷ್ಟೇ. ನಾನು ಅವರನ್ನು ಭಾಷ ಅನ್ಧರೆಂದು ಜರಿಯುದಿಲ್ಲ ಬದಲಾಗಿ ಅವರು ಅವರ ಭಾಷೆಗೆ ಇಟ್ಟಿರಿವ ಅಭಿಮಾನಕ್ಕೆ ಗೌರವಿಸುತ್ತೇನೆ.
    ಇನ್ನು ಪಕ್ಕದ ಮನೆಯ ಮಕ್ಕಳ ಊಟದ ವಿಚಾರಕ್ಕೆ ಬಂದರೆ, ಸ್ವಾಮೀ, ಪಕ್ಕದ ಮನೆಯ ಮಕ್ಕಳಿಗೆ ಇಲ್ಲಿ ಊಟಕ್ಕೆ ಏನು ಕಮ್ಮಿ ಆಗಿಲ್ಲ "ಮನೆಗೆ ಮಾರಿ ಊರಿಗೆ ಉಪಕಾರಿ" ಆಗಿ ಯಾವ ದೊಡ್ಡ ಕಿರೀತ ಹೊರುವ ಅವಶ್ಯಕತೆ ನಮಗೆ ಇಲ್ಲ.
    ಕಲೆ ಮತ್ತು ಕಲಾವಿದರು ಭಾಷೆಗೆ ಮೀರಿದ್ದು ಎಂಬ ನಿಮ್ಮ ನಂಬಿಕೆ ಸರಿ ಆದದ್ದೇ, ಹಾಗಾದರೆ ನಮ್ಮ ಕಲಾವಿದರಿಗೆ ನಮ್ಮ ಕಲೆಗಳಿಗೆ ಹೊರ ರಾಜ್ಯದಲ್ಲಿ ಏಕೆ ಮನ್ನಣೆ ಸಿಗುತ್ತಿಲ್ಲ?

    ಪ್ರತ್ಯುತ್ತರಅಳಿಸಿ
  9. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  10. ಇದಕ್ಕೆ ಏನು ಹೇಳಬೇಕೋ ನಂಗೆ ತಿಳಿಯುತ್ತಿಲ್ಲ, ಈಗಷ್ಟೇ ಉಳಿದವರನ್ನು ಭಾಷಂಧರೆಂದು ಕರೆದು ಈಗ ಅವರನ್ನು ನಾನು ಗೌರವಿಸುತ್ತೇನೆ ಎಂದು ನಿಮ್ಮಲ್ಲೇ 'ದ್ವಂದ್ವ' ಅಡಗಿರುವಾಗ ಇನ್ನು ವಿಶ್ವ ಮಾನವದ ಸರಿಯಾದ ಅರ್ಥ ನಾನಿಲ್ಲಿ ತಿಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಈಗಷ್ಟೇ ಇನ್ನೊಬ್ಬ ಭಾಷಿಕರನ್ನು ಕಸದಂತೆ ಕಂಡು ಮತ್ತೆ ನನಗೆ ಬಂದು 'ಬೇರೆ ಭಾಷೆಯವರನ್ನು ಕಸದಂತೆ ಕಾಣುವರು ಭಾಷಭಿಮಾನಿಗಳಲ್ಲ' ಎಂದು ಹೇಳುತ್ತಿದ್ದೀರಿ.
    'ಸಮಯ ಬಂದಾಗ ನಿಮಗೆ ಆ ಭಗವಂತ ಎಲ್ಲವನ್ನು ಅರ್ಥ ಮಾಡಿಸಲಿ ಎಂದು ಕೇಳಿಕೊಳ್ಳುತ್ತಾ' ನನ್ನೆರೆದು ಬರವಣಿಗೆ ಮುಗಿಸುತ್ತೆದ್ದೇನೆ.

    ಪ್ರತ್ಯುತ್ತರಅಳಿಸಿ
  11. I am sorry i cannot type in kannada but that doesn't make me any less of being a kannadiga :) The problem lies not with Sandal Wood alone ... its most of the South Indian Movies which i consider virtually dead with only little creativity which we see every now and then from Tamil Industry and at times from Kerala too ... but i wont deny the fact that there are no good creative directors ... Its wrong , Its just that whatever they have to do doesn't take the limelight !!! and to some extent it with us audience also bec most of us just sign up for the weekend for some theatre for any crap they have to offer us to see which is good enough for them to make more of that stuff ...and bollywood isn't any better either given the fact they remake most of the movies from south :)

    ಪ್ರತ್ಯುತ್ತರಅಳಿಸಿ
  12. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  13. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  14. ಚೆನ್ನಾಗಿ ಬರೆದ್ದಿದ್ದೀರ ರತೀಶ್.

    @ಶರತ್ - ಕನ್ನಡ ಚಿತ್ರಗಳನ್ನು ೬ ತಿಂಗಳಲ್ಲಿ ನೋಡಿಲ್ಲ ಎಂದು ಆದರೆ, ಅವರು ಕನ್ನಡದಲ್ಲಿ ಮನರಂಜನೆಯನ್ನು ಕೇಳಲು ಅರ್ಹರಲ್ಲ ಎಂದು ತೀರ್ಮಾನಿಸುವುದು ಎಷ್ಟು ಸರಿ. ನಾನು ಕೊನೆ ಆರು ತಿಂಗಳಲ್ಲಿ ಬಂದ ಕೆಟ್ಟ / ಒಳ್ಳೆಯ ಚಿತ್ರ ಎರಡನ್ನು ನೋಡಿಲ್ಲವೆಂದರೆ, ನಾನು ಕನ್ನಡದಲ್ಲಿ ಮನರಂಜನೆ ಕೇಳುವುದೇ ತಪ್ಪೆ. ಇದು ಯಾವ ಪರಿ ನ್ಯಾಯ?

    ನಾನು ಕೇಳುತ್ತಿರುವುದು ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ. ಅದು ಕೋಡಬೇಕಾದು ಅವರ ಧರ್ಮ. ಇದರ ಮದ್ಯೆ ಹಿಂದಿ ನುಸುಳಿದರೆ, ಅದನ್ನು ಅಬ್ಬೆಪಾರಿಯ ಹಾಗೆ ನೋಡಲು ನಾನು ನಿರಭಿಮಾನಿಯೇ? ಕನ್ನಡ ಕಾರ್ಯಕ್ರಮದಲ್ಲಿ ಹಿಂದಿಯನ್ನು ತೂರಿಸಿ, ತಮ್ಮ ಕಾಲ ಮೇಲೆ ತಾವೆ ಕೊಡಲಿ ಹಾಕಿಕೊಳ್ಳುತ್ತಿರುವುದು ಕನ್ನಡ ಚಿತ್ರರಂಗ, ಅದರ ಬಗ್ಗೆ "ಚ" ಕಾರವೆತ್ತದೆ ಕುಳಿತಿರಲು ನಮಎಗೇನು ಕೇಡುಗಾಲ?

    ನೀವೆ ಹೇಳಿದ್ದನ್ನೆ ತೆಗೆದು ಕೊಂಡರೆ ಕನ್ನಡಿಗರು ಆಯ್ಕೆ ಮಾಡುವುದು ಪರಭಾಷೆ ಚಿತ್ರವನ್ನ, ಅದಕ್ಕೆ ಕಾರಣರ್ಯಾರು - ಕನ್ನಡ ಚಿತ್ರರಂಗಕ್ಕೆ ಕೊಡುವ ಪ್ರಶಸ್ತಿ ಸಮಾರಂಭದಲ್ಲಿ ಹಿಂದಿ ಹಾಡುಗಳನ್ನು ತುರುಕಿದರು, ಅದಕ್ಕೆ ಚಪ್ಪಾಳೆ ತಟ್ಟಿ ಕಾಲು ಕುಣಿಸುವ ನಮ್ಮ ಕನ್ನಡ ಚಿತ್ರರಂಗದವರು. ಮತ್ತು ಇದನ್ನು ಪ್ರಶ್ನಿಸದೆ ಕುಳಿತ ಪ್ರೇಕ್ಷಕ ವರ್ಗ.

    ಪ್ರತ್ಯುತ್ತರಅಳಿಸಿ
  15. My opinion is 100% consensus with yours Ratheesh. ಎರಡು ಸಾವಿರಕ್ಕೂ ಹಳೆಯ ಭಾಷೆ ಕನ್ನಡ. ಜಗತ್ತಿನಲ್ಲಿ ಕ್ಲಾಸ್ಸಿಕಾಲ್ ಲಾಂಗ್ವೇಜ್ ಅನ್ನಿಸಿಕೊಳ್ಳುವ ಭಾಗ್ಯ ಬೆರಳೆಣಿಕೆಯಷ್ಟು ಭಾಷೆಗಳಿಗೆ ಮಾತ್ರ ಇದೆ. ಅದರಲ್ಲಿ ಕನ್ನಡವೂ ಒಂದು..... ಇಂತಹ ಜನರ ತಲೆಯಲ್ಲಿ ಮೆದುಳು ಬಿಟ್ಟು ಬಾಕಿ ಎಲ್ಲವೂ ಇರುತ್ತೆ.

    ಪ್ರತ್ಯುತ್ತರಅಳಿಸಿ
  16. Abhay, I really liked your comment, not for the reason that you said you are in consensus with my opinion but for the text ಎರಡು ಸಾವಿರಕ್ಕೂ ಹಳೆಯ ಭಾಷೆ ಕನ್ನಡ. ಜಗತ್ತಿನಲ್ಲಿ ಕ್ಲಾಸ್ಸಿಕಾಲ್ ಲಾಂಗ್ವೇಜ್ ಅನ್ನಿಸಿಕೊಳ್ಳುವ ಭಾಗ್ಯ ಬೆರಳೆಣಿಕೆಯಷ್ಟು ಭಾಷೆಗಳಿಗೆ ಮಾತ್ರ ಇದೆ. ಅದರಲ್ಲಿ ಕನ್ನಡವೂ ಒಂದು..... ಇಂತಹ ಜನರ ತಲೆಯಲ್ಲಿ ಮೆದುಳು ಬಿಟ್ಟು ಬಾಕಿ ಎಲ್ಲವೂ ಇರುತ್ತೆ.

    ಪ್ರತ್ಯುತ್ತರಅಳಿಸಿ
  17. ನನ್ನ ಅನಿಸಿಕೆ ಇಷ್ಟೇ. ಹೆಚ್ಹಿನ ಕನ್ನಡಿಗರಿಗೆ ದೇವರಾಣೆ ಭಾಷಾಂಧತೆ ಇಲ್ಲ. ಒಳ್ಳೆಯದೇ. ಆದರೆ ಅದರರ್ಥ ತಮ್ಮ ಮೂರ್ಖತನವನ್ನು ಜಗಜ್ಜಾಹಿರ ಮಾಡಬೆಕಂದಲ್ಲ. ಭಾಷೆಯನ್ನು ಬೆಳೆಸುವುದು ಹಾಗಿರಲಿ, ಕನ್ನಡ ಉಳಿಸಿ ಎಂಬ ಪದವು ನಿಜವಾಗಲೂ ಅಣಕದ ಅಂಕುರವಾಗಿದೆ.

    ಪ್ರತ್ಯುತ್ತರಅಳಿಸಿ
  18. ನಿಮ್ಮ ಅಳಲು ನನಗೆ ಅರ್ಥವಾಯಿತು ರತೀಶ್,
    ಆದರೆ ನಾವು ಕನ್ನಡಿಗರು ಎಷ್ಟು ನಿಷ್ಟಾವಂತರು,
    ಮಾತನಾಡಿದರೆ ರಜನಿ ರಜನಿ ರಜನಿ ಅಂತೇವೆ ಆದರೆ
    ನಮ್ಮವರನ್ನ ನಾವು ಕನ್ನಡಿಗರು ಎಷ್ಟು ಪ್ರಚಾರಕ್ಕೆ ಬಳಸುತ್ತೇವೆ.
    ಅದು ಹಾಗಿರಲಿ ರಜನಿ ಕನ್ನಡದಲ್ಲಿ ನಟಿಸಿರುವುದು ಬಹಳ ಕಡಿಮೆ, ಅವರು
    ತಮಿಳು ಚಿತ್ರಗಳ ಬಿಟ್ಟರೆ ಕನ್ನಡದಲ್ಲಿ ಮಾಡುವುದೇ ಇಲ್ಲ.
    ಅವರನ್ನ ಎಲ್ಲ ಚಿತ್ರರಂಗಕ್ಕೆ ಡಾನ್ ನಂತೆ ಬಿಂಬಿಸಿ, ಅವರು ಒಪ್ಪಿಗೆ ಕೊಟ್ಟರೆ ಮಾತ್ರ
    ಸ್ಯಾಂಡಲ್ ವುಡ್ ಉಳಿಯುತ್ತೆ, ಇಲ್ಲವಾದರೆ ಇಲ್ಲ ಅಂತ ಮಾತಾಡ್ತೀವಿ.
    ಮತ್ತೆ ಇತ್ತೀಚೆಗೆ ನೀವು ಫ಼ೇಸ್ ಬುಕ್ ನಲ್ಲಿ ಅವರ ರಾ ವನ್ ಹಾಸ್ಯ ಚಿತ್ರ ನೋಡಿರಬಹುದು, ಅದರಲ್ಲಿ
    ರಜನಿ ಶಾರುಖ್ ಅವರನ್ನ ಎತ್ತಿ ಹಿಡಿದು, ಶಾರುಖ್ ಗೂ ಕೂಡ ಒಬ್ಬರೆ ಚಿತ್ರ ಗೆಲ್ಲಕಾಗಲ್ಲ ಅಂತ
    ತಮಾಷೆ ತೋರಿಸಿ, ರಜನಿ ಪ್ರಚಾರ ಮಾಡ್ತಿದ್ದಾರೆ. ಇದು ನಿಲ್ಲಬೇಕು.
    ತಮಾಷೆ ಮಾಡಿದರು ಈ ಚಿತ್ರ ರಂಗದಲ್ಲಿ ಅದು ಅವರ ವ್ಯಕ್ತಿತ್ವ ಪ್ರಚಾರ ಮಾಡಿಬಿಡುತ್ತೆ, ಅದು ಸುಳ್ಳು ಅಗಿದ್ದರು
    ನಮ್ಮ ಚಿತ್ರಗಳ ಹೀರೋಗಳ ಪ್ರತಿಭೆಯನ್ನ ಕ್ರುಶರನ್ನಗಿ ಮಾಡಿಬಿಡುತ್ತೆ.
    ಇದು ಸರಿಯೇ
    ಜೈ ಕರ್ನಾಟಕ

    ಪ್ರತ್ಯುತ್ತರಅಳಿಸಿ